Index   ವಚನ - 8    Search  
 
ಬೆಳಗು ನಷ್ಟವಾದಲ್ಲಿ ಕಳೆ ಪ್ರಜ್ವಲಿತವಿಲ್ಲ, ಕ್ರೀ ನಷ್ಟವಾದಲ್ಲಿ ಅರಿವಿನ ತೆರಪಿಗೊಡಲಿಲ್ಲ. ಕ್ರೀಯಂಗಕ್ಕೆ, ಅರಿವು ಆತ್ಮಂಗೆ. ಇಂತೀ ಉಭಯ ಏಕವಾದಲ್ಲಿ ಲಕ್ಷನಿರ್ಲಕ್ಷ್ಯವಾಗಿ, ಗಾರುಡೇಶ್ವರಲಿಂಗವು ಗಾರುಡಕ್ಕೆ ಬಾರನು.