Index   ವಚನ - 1    Search  
 
ಎರಡನರಿವಲ್ಲಿ ಭಂಡಾರಿ ಬಸವಣ್ಣ, ಮೂರನರಿವಲ್ಲಿ ಚೆನ್ನಬಸವಣ್ಣ, ಒಂದನರಿವಲ್ಲಿ ಪ್ರಭುದೇವರು. ಇಂತೀ ಉಭಯದ ಸಂಗಂಗಳ ಮರೆದಲ್ಲಿ ನಿಜಗುಣ ನಿಜಸಂಗ. ಇಂತೀ ಬಂಧಮೋಕ್ಷಕರ್ಮಂಗಳು ಒಂದೂ ಇಲ್ಲದ ಮತ್ತೆ ಬಾಗಿಲಿಂಗೆ ತಡಹಿಲ್ಲ. ಎನ್ನ ಮಣಿಹ ಕೆಟ್ಟಿತ್ತು, ಕೂಡಲಸಂಗಮದೇವರಲ್ಲಿ ಬಸವಣ್ಣ ಎನಗಾ ಮಣಿಹ ಬೇಡಾಯೆಂದ ಕಾರಣ.