Index   ವಚನ - 1    Search  
 
ಅಂಗದ ಬೆಂಬಳಿಯಲು ಭಂಗವೆಂದರಿಯರು. ಲಿಂಗದ ಬೆಂಬಳಿಯಲಾದ ಪ್ರಸಾದಿಯು ಅರ್ಪಿತವನರಿಯ. ಪ್ರಸಾದದಲ್ಲಿ ಪರಿಣಾಮಿಯಾಗಿ, ಮಹಾಘನ ಸೋಮೇಶ್ವರನು ಮುಂತಾಗಿ, ಅರಿವೇ ಅನುಭಾವವಾದ ಪ್ರಸಾದಿ.