ಹಂಸಪತಿ ಗರುಡಪತಿ ವೃಷಭಪತಿ ಮೊದಲಾದ ಸರ್ವಜೀವಾಧಿಪತಿ
ದೇವರಾಯ ಮಹಾರಾಯನ ಅರಸುತನ ಹೊಸತು:
ಓಲಗಕ್ಕೆ ಬಾರ, ಸಿಂಹಾಸನದಲ್ಲಿ ಕುಳ್ಳಿರ,
ಸ್ತ್ರೀಲಂಪಟನಾಗಿ ಅಂತಃಪುರವ ಬಿಟ್ಟು ಹೊರವಂಡ.
ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ,
ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು,
ತೆರೆದ ಬಾಗಿಲ ಮುಚ್ಚುವರಿಲ್ಲ, ಮುಚ್ಚಿದ ಬಾಗಿಲ ತೆರೆವವರಿಲ್ಲ.
ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು,
ಭಕ್ತರೆಂಬವರಿನ್ನು ಬದುಕಲೇಬಾರದು.
Art
Manuscript
Music
Courtesy:
Transliteration
Hansapati garuḍapati vr̥ṣabhapati modalāda sarvajīvādhipati
dēvarāya mahārāyana arasutana hosatu:
Ōlagakke bāra, sinhāsanadalli kuḷḷira,
strīlampaṭanāgi antaḥpurava biṭṭu horavaṇḍa.
Kappakāṇikeyanoppisikombavarilla,
guruvemba taḷavārana ājñe keṭṭittu,
tereda bāgila muccuvarilla, muccida bāgila terevavarilla.
Hampeya virupayyana arasutana keṭṭittu,
bhaktarembavarinnu badukalēbāradu.