Index   ವಚನ - 2    Search  
 
ಕಾಲವಂಚಕನಾಗಿ ಜಂಗಮಕಿಕ್ಕಿದಡೆ ಕರ್ಮವೆ ತಿಂಬುದು. ಉಪಚರಿಸಿಕೊಂಬವನಾಗಿ ತ್ರಿಸಂಧಿಯಲ್ಲಿ ಲಿಂಗಪೂಜೆಯ ಮಾಡಿದಡೆ ಅದು ಹಸಿವಿಲ್ಲದ ಗ್ರಾಸ, ಅಸಮಾಕ್ಷನ ಮುಟ್ಟದು. ಇವು ಹುಸಿಯಲ್ಲವೆಂದೆ, ಕಾಮಹರಪ್ರಿಯ ರಾಮನಾಥಾ.