Index   ವಚನ - 10    Search  
 
ಹುಟ್ಟುವ ಜೀವಿಗಳೆಲ್ಲರೂ ಹಲವು ತೆರದ ಘಟದಲ್ಲಿ ಬಂದು ತಮ್ಮ ಕ್ಷುತ್ತುವ ಕೊಂಬಂತೆ ಮರ್ತ್ಯದಲ್ಲಿ ಬಂದವರೆಲ್ಲರೂ ನಿಶ್ಚಯರಪ್ಪರೆ? ಒಚ್ಚತ ಹರಿಯಜ ರುದ್ರರು ಮೊದಲಾದವರೆಲ್ಲರೂ ಸಿಕ್ಕಿದರೇಕೆ ಮಾಯೆಗೆ? ಇದರಚ್ಚಿಗವ ಕಂಡು ನಾನು ಭಕ್ತನೆಂದಡೆ ತಪ್ಪ ಸಾಧಿಸುವ ಕಾಮಹರಪ್ರಿಯ ರಾಮನಾಥಾ.