ಅಂಗಕ್ಕೆ ಲಿಂಗ ಆಚಾರ, ಲಿಂಗಕ್ಕೆ
ಸರ್ವಕ್ರಿಯಾಸಂಬಂಧ ಆಚಾರ.
ಆ ಆಚಾರಕ್ಕೆ ಸರ್ವಗುಣ ವಿಚಾರದಿಂದೆ
ಬೀಜ ನಿರ್ಬೀಜನರಿದು
ಕಾಬುದು ಕಾಣಿಸಿಕೊಂಬ ಉಭಯವ ವೇದಿಸಿ
ಪರುಷ ಲೋಹವ ಗ್ರಹಿಸಿದಂತೆ ವಿಭೇದಕ್ಕೆ ಒಡಲಲ್ಲದೆ
ನಿಂದ ನೆಲೆ, ಲಿಂಗ ಪ್ರಾಣದ ಕೂಟ; ಇದು ವಿಶುದ್ಧಿ,
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ನಿಷ್ಷತ್ತಿಯಾದ ನಿರ್ವೇದ.
Art
Manuscript
Music
Courtesy:
Transliteration
Aṅgakke liṅga ācāra, liṅgakke
sarvakriyāsambandha ācāra.
Ā ācārakke sarvaguṇa vicāradinde
bīja nirbījanaridu
kābudu kāṇisikomba ubhayava vēdisi
paruṣa lōhava grahisidante vibhēdakke oḍalallade
ninda nele, liṅga prāṇada kūṭa; idu viśud'dhi,
gōpatinātha viśvēśvaraliṅgadalli niṣṣattiyāda nirvēda.