Index   ವಚನ - 8    Search  
 
ಉದಯದಲ್ಲಿ ಬ್ರಹ್ಮನ ಕಾವೆ ಮಧ್ಯಾಹ್ನಕ್ಕೆ ವಿಷ್ಣುವ ಕಾವೆ ಅಸ್ತಮಯದಲ್ಲಿ ರುದ್ರನ ಕಾವೆ. ಕತ್ತಲೆಯಾದ ಮತ್ತೆ ತಮ್ಮ ತಮ್ಮ ಮಂದೆಗೆ ಹೊಡೆದು ಈ ಕಾವ ಕಟ್ಟಿಗೆಯ ಇನ್ನೆಂದಿಗೆ ಬಿಡುವೆ? ಗೋಪತಿನಾಥ ವಿಶ್ವೇಶ್ವರಲಿಂಗವು ನಷ್ಟವಹನ್ನಕ್ಕ ಎನ್ನ ಕೈಯ ಕಟ್ಟಿಗೆ ಬಿಡದು.