Index   ವಚನ - 19    Search  
 
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಭಕ್ತಿಸ್ಥಲ ಮಹೇಶ್ವರಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಶರಣಸ್ಥಲ ಐಕ್ಯಸ್ಥಲ ಇಂತೀ ನವಗುಣಸ್ಥಲಂಗಳಲ್ಲಿ ಸಾಧಕ ಮೂರು, ಸಾಧ್ಯ ಮೂರು, ಅಸಾಧ್ಯ ಮೂರು. ಸಾಧಕದಿಂದ ಸಾಧ್ಯ, ಸಾಧ್ಯದಿಂದ ಅಸಾಧ್ಯ, ಅಸಾಧ್ಯದಿಂದ ಭೇದಕತ್ವ ಇಂತೀ ದಶಗುಣಸಿದ್ಧಿ. ಸಿದ್ಧಿಯಾದಲ್ಲಿ ಮೂವತ್ತಾರು ಭೇದ ಇಪ್ಪತ್ತೈದು ತತ್ತ್ವ ನೂರುಸ್ಥಲ ಪ್ರಮಾಣು ಒಂದು ಸ್ಥಲದಲ್ಲಿ ನಿಂದು ಐಕ್ಯವಾಗಲಾಗಿ ಬೀಜದೊಳಗಣ ಫಲ ಪರ್ಣ ಅಂಕುರ ವಿಭೇದವಿಲ್ಲದೆ ಅಡಗಿದಂತೆ. ಈ ಗುಣ ಸರ್ವಸ್ಥಲ ಸಂಪೂರ್ಣವ ಐಕ್ಯಬೀಜ ನಾಮ ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಉಭಯವಳಿದ ನಿರ್ವೀಜ.