Index   ವಚನ - 23    Search  
 
ದೃಷ್ಟಿಯ ದೃಷ್ಟದಿಂದ ಮೋಹದ ಲವಲವಿಕೆ. ಮೋಹದ ಲವಲವಿಕೆಯಿಂದ ಸ್ವರ್ಶನದ ಉಭಯದ ಕೂಟ ಏಕವಾದಲ್ಲಿ ಹಿಂದಣ ಕುರುಹು ಮುಂದಣ ಲಕ್ಷ್ಯ ಅಲಕ್ಷ್ಯನಾಗಿ ದಂಪತಿ ದ್ವಂದ್ವವಿಲ್ಲದೆ, ನಿಜವೆಂಬ ಕುರುಹು ಅರಿಕೆದೋರದೆ ಅವಿರಳ ನಾಮಶೂನ್ಯವಾದದು ಗೋಪತಿನಾಥ ವಿಶ್ವೇಶ್ವರಲಿಂಗವು ಹೃತ್ಕಮಲದಲ್ಲಿ ವಿಶ್ರಾಂತಿಯಾದ ಇರವು.