Index   ವಚನ - 4    Search  
 
ಅತ್ತಲಿಂದ ಬಂದವನ ಇತ್ತಳವ ಕಂಡು, ಇತ್ತಲಿಂದ ಹೋದವನ ಅತ್ತಳವ ಕಂಡು, ಇದೆತ್ತಣ ಸುದ್ದಿಯೆಂದು ನಾ ಕೇಳಲಾಗಿ, ಕತ್ತೆ ಸತ್ತಿತ್ತು, ಕುದುರೆ ಹರಿಯಿತ್ತು, ಬೇಹಾರ ನಷ್ಟವಾಯಿತ್ತು. ಮಧುಕೇಶ್ವರಲಿಂಗವೇ ಎಂದು ಬಾಯಾರುವ ಚಿತ್ತ ಬಟ್ಟಬಯಲಾಯಿತ್ತು!