Index   ವಚನ - 11    Search  
 
ಆರುಸ್ಥಲ ವರ್ಣಿಸುವಲ್ಲಿ ಭಕ್ತಂಗೆ ಮಾಹೇಶ್ವರಂಗೆ ಪ್ರಸಾದಿಗೆ ಪ್ರಾಣಲಿಂಗಿಗೆ ಶರಣ ಐಕ್ಯಂಗೆ. ಸ್ಥಲವಾರು ಲಿಂಗವೊಂದೆ; ವರ್ಣವಾರು ಪಟವೊಂದೆ; ಅಕ್ಷರವಾರು ಬೀಜವೊಂದೆ; ದಳವಾರು ಆತ್ಮವೊಂದೆ. ಇಂತೀ ಭೇದಂಗಳು ಭಿನ್ನವಾಗಿ; ನಿಚ್ಚಣಿಗೆಯ ಮೆಟ್ಟಿನಂತೆ, ಮೊದಲು ತುದಿಯಾದಿಯಾಗಿ ತುದಿಕಡೆಯಾದಿಯಾಗಿ ಎಡೆತಾಕುವ ತೆರದಂತೆ, ಸ್ಥಲವೆರಡು ಆಚರಣೆ ನಾಲ್ಕು. ಇಂತೀ ಭೇದವಾರರಲ್ಲಿ ಷಡುಸ್ಥಲ ಸಂದು, ಸಂಗನ ಬಸವಣ್ಣ ಚನ್ನಬಸವಣ್ಣನಿಂದ ಪ್ರವಾಹವಾಗಿ ಭಕ್ತಿ ರೂಪಾಯಿತ್ತು. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.