Index   ವಚನ - 15    Search  
 
ಈ ಸಂಸರ್ಗದಲ್ಲಿ ಹುಟ್ಟಿದ ಶಿಶುವೆಂದು ಮಾಯಾಮೋಹದಿಂದ ಲಾಲಿಸಿ, ಸಕಲ ಸುಖಭೋಗಂಗಳಲ್ಲಿ ಪಾಲಿಸಿ, ವಸ್ತು ವಸ್ತ್ರ ಮುಂತಾದ ರತ್ನಮೌಕ್ತಿಕಂಗಳ ಗಳಿಸಿ ನಿಕ್ಷೇಪಿಸಿಪ್ಪವರಿಂದ ಕಡೆಯೆ? ತನ್ನ ಕರಕಮಲದಲ್ಲಿ ಹುಟ್ಟಿದ ಶಿಶುವಿಂಗೆ ಶಿವಜ್ಞಾನದಿಂದ ಬಂದ ಶಿಷ್ಯಂಗೆ ಶಿವಶ್ರದ್ಧೆ ಮೋಹ ಹೀಗಿರಬೇಕು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು.