Index   ವಚನ - 25    Search  
 
ಕರಣಂಗಳ ನಿವೃತ್ತಿಯ ಮಾಡಿ ಲಿಂಗವ ಕಂಡೆಹೆನೆಂಬಲ್ಲಿ ಮುಂದೆ ಅರಿದು ಕಾಣಿಸಿಕೊಂಬ ಕುರುಹು ಅದೆಂತುಟಯ್ಯಾ? ಆ ಕರಣವೆ ಮೊದಲು ಆ ಕುರುಹು ಹಿಂಗೆ ಆ ಕುರುಹಿಂದೆ ಇಂದ್ರಿಯಂಗಳು ಸಲೆಸಂದು, ನೀರನಟ್ಟಿ ಮುಂದಳ ಸಾರ ಸವಿಯ ಫಲ ಭೋಗಂಗಳ ಬೆಳೆವಂತೆ, ಇದು ಲಿಂಗವ್ಯವಧಾನಿಯ ಸಂಬಂಧ, ಇಂದ್ರಿಯ ಲಿಂಗ ಮುಖಂಗಳಿಂದ ಲಿಂಗ ಇಂದ್ರಿಯ ಮುಖದಿಂದ. ಗಂಧ ಕುಸುಮದಂತೆ ಇಂದ್ರಿಯ ಕುರುಹಿನ ಭೇದ. ಈ ದ್ವಂದ್ವ ಉಳ್ಳನ್ನಕ್ಕ ದೃಕ್ಕಿಂಗೆ ದೃಷ್ಟಿಯಿಂದ ಕಾಣಿಸಿಕೊಂಬಂತೆ ಅರಿವು ಕುರುಹಿನ ಭೇದ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.