•  
  •  
  •  
  •  
Index   ವಚನ - 481    Search  
 
ಭಕ್ತರೆಲ್ಲರೂ ಲಂದಣಿಗರಾಗಿ ಹೋಯಿತ್ತು. ಜಂಗಮಗಳೆಲ್ಲರೂ ಉಪಜೀವಿಗಳಾಗಿ, ಹೋದರು. ಇದೇನೊ? ಇದೆಂತೊ? ಅರಿಯಲೆ ಬಾರದು. ಕಾಯಗುಣ ನಾಸ್ತಿಯಾದಾತ ಭಕ್ತ, ಪ್ರಾಣಗುಣ ನಾಸ್ತಿಯಾದಾತ ಜಂಗಮ, ಉಳಿದವೆಲ್ಲವ ಸಟೆಯೆಂಬೆ ಗುಹೇಶ್ವರಾ.
Transliteration Bhaktarellarū landaṇigarāgi hōyittu. Jaṅgamagaḷellarū upajīvigaḷāgi, hōdaru. Idēno? Idento? Ariyale bāradu. Kāyaguṇa nāstiyādāta bhakta, prāṇaguṇa nāstiyādāta jaṅgama, uḷidavellava saṭeyembe guhēśvarā.
Hindi Translation सब भक्त बावर्ची बनें। सब जंगम उपजीवी बनें यह क्या? यह कैसे? न जानता। शरीर गुण नाश हुआ भक्त बना, प्राण गुण नाश हुआ जंगम बना, बचे सब झूठे हैं गुहेश्वरा। Translated by: Banakara K Gowdappa Translated by: Eswara Sharma M and Govindarao B N
Tamil Translation பக்தர்தம் வாழ்வு சமைப்பதிலேயே அகன்றது. ஜங்கமர்வாழ்வு பிறர் வீட்டில் உண்பதிலே அகன்றது இதென்னவோ, இது எப்படியோ அறியவியலாது. உடலியல்பு அகன்றவன் பக்தன் பிராண இயல்பு அகன்றவன் ஜங்கமன் மற்றனைத்தையும் பொய்யென்பேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಪಜೀವಿಗಳು = ಪರಾನ್ನಭೋಜಿಗರು; ಕಾಯಗುಣ = ಕಾಯದ ಬಯಕೆಗಳು, ಆ ಬಯಕೆಗಳನೀಡೇರಿಸುವುದರಿಂದ ಉಂಟಾಗುವ ಸುಖಗಳು; ನಾಸ್ತಿಯಾಗು = ಇಲ್ಲದಾಗು, ಕಾಯಗುಣದ ಭಾವ ಕಳೆದುಕೊ; ನಾಸ್ತಿಯಾಗು = ಇಲ್ಲದಾಗು-ಪ್ರಾಣಗುಣದ ಭಾವ ಕಳೆದುಕೊ; ಪ್ರಾಣಗುಣ = ಪ್ರಾಣದ ಹಸಿವು-ತೃಷೆಗಳು; ಲಂದಣಿಗರು = ಮಾಡಿ ನೀಡುವಲ್ಲಿಯೆ ಮಗ್ನರಾದ ಬಾಣಸಿಗರು; ಹೋಗು = (ಅವರ ಬದುಕು) ಸವೆದುಹೋಗು; Written by: Sri Siddeswara Swamiji, Vijayapura