ಕಾಲಿಗೆ ಕಣ್ಣು ಹುಟ್ಟಿ ಬಾಯಿ
ಬಸುರಾಗಿ ಕಿವಿಯಲ್ಲಿ ಹುಟ್ಟಿ
ಕೈಯಲ್ಲಿ ಬೆಳವುತ್ತಿದೆ ನೋಡಾ ಆ ಶಿಶು!
ಉ ಎಂದಲ್ಲಿ ಉಪಮೆಗೆ ಬಾರದು,
ಉಗ್ಗೆಂದಲ್ಲಿ ಹೊಂದದು ಜಗವ.
ಅಂಬಳಿಕ್ಕುವುದಕ್ಕೆ ಮೊದಲೆ ಕಂಬಳಿಯ ಮುಸುಕಿಟ್ಟು
ಈ ತ್ರಯದ ಬೆಂಬಳಿಯಲ್ಲಿಯೆ ಲೀಯ.
ಇದು ಜ್ಞಾನಪಿಂಡೈಕ್ಯ.
ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.