Index   ವಚನ - 60    Search  
 
ಪ್ರಸಾದಕ್ಕೆಂದು ಮುಯ್ಯಾಂತು ಕೈವೊಡ್ಡಿ ಬಾಯಿದೆರೆವಲ್ಲಿ ಘೃತ ಪಳ ಮಧುರ ರಸ ಮೃಷ್ಟಾನ್ನವೆಂದು ಚಿತ್ತದಲ್ಲಿ ಕಲೆದೋರಿ, ಜಿಹ್ವೆಯ ಲಂಪಟಕ್ಕೆ ಕೈಯಾಂತು ಬಾಯಿಬಿಟ್ಟು ಕೊಂಡಡೆ, ಸಮ್ಮಗಾರನ ತಿತ್ತಿಯ ಪೋಷಣ ಪ್ರಸಾದಿಗೆ ನಿಶ್ಚಯವಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.