Index   ವಚನ - 26    Search  
 
ಕಲ್ಲಿಯ ಹಾಕಿ ನೆಲ್ಲವ ತುಳಿದು ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ; ವಾಗದ್ವೈತವ ಕಲಿತು ಸಂಸ್ಕ್ರತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ ಅದೇತರ ನುಡಿ? ಮಾತಿನ ಮರೆ. ಆತುರವೈರಿ ಮಾರೇಶ್ವರಾ.