Index   ವಚನ - 31    Search  
 
ಕಾಳಕೂಟವ ಕೊಡುವರೆಲ್ಲರು, ಕೊಂಬವನಾರನೂ ಕಾಣೆ. ಮಲತ್ರಯವ ಬಿಡೆಂದು ಹೇಳುವರೆಲ್ಲರನೂ ಕಂಡೆ. ತಾ ತೊಲಗಿ ಹೆರೆಹಿಂಗಿ ಛೀ ಮುಟ್ಟದಿರೆಂಬವರನಾರನೂ ಕಾಣೆ. ಸಕಲೇಂದ್ರಿಯದಲ್ಲಿ ತೊಟ್ಟು ಬಿಟ್ಟರೆಂದು ಹೇಳುವರ ಮಾತಿನ ದೃಷ್ಟವ ಕಂಡೆ. ಚಿತ್ತ ವಸ್ತುವಿನಲ್ಲಿ ಬೆಚ್ಚಂತೆ ಕೂಡಿಹರ ಸ್ವಪ್ನದಲ್ಲಿ ಕಾಣೆ. ವಾಗದ್ವೈತದ ಭಾವಿಗಳ ಸಾಕುಬೇಕಾದಷ್ಟು ಕಂಡೆ, ಸ್ವಯಾದ್ವೈತ ಸಂಪನ್ನರ ನಾ ಬಂದಂದಿಂದ ಎಂದೂ ಕಾಣೆ. ಅದು ಎನ್ನ ಇರವೋ? ಪಾಪಿಯ ಕಣ್ಣಿಗೆ ಪರುಷ ಪಾಷಾಣದಂತೆ! ಎನ್ನ ಭಾವದ ಮಾಯೆ ಎನ್ನಲ್ಲಿ ನೀ ಕಾಣಿಸಿಕೊಳ್ಳದಿರವೊ. ಇಂತೀ ಉಭಯವ ಚೆನ್ನಾಗಿ ಪೇಳು, ಆತುರವೈರಿ ಮಾರೇಶ್ವರಾ.