ತೊಡೆಯಲ್ಲಿ ಸರಮುದ್ರೆ, ಜಡೆಯಲ್ಲಿ ಸರಮುದ್ರೆ
ಉಡಿಯಲ್ಲಿ ಲಿಂಗಮುದ್ರೆ.
ಇದರ ಒಡಗೂಡುವ ತೆರನಾವುದು?
ಬಿಡು ಸಾಕು, ನಿನಗೆ ಇವು ಒಡವೆಯಲ್ಲ.
ನಿನ್ನಿಡಿಗೆರಗುವೆ, ಆತುರವೈರಿ ಮಾರೇಶ್ವರಾ.
Art
Manuscript
Music
Courtesy:
Transliteration
Toḍeyalli saramudre, jaḍeyalli saramudre
uḍiyalli liṅgamudre.
Idara oḍagūḍuva teranāvudu?
Biḍu sāku, ninage ivu oḍaveyalla.
Ninniḍigeraguve, āturavairi mārēśvarā.