ನೆನಹಿನ ಭಾವಕ್ಕೆ ಈ ಭವ;
ಮನಸಿನ ಮೋಹವೆಲ್ಲ ಸತಿ;
ಆಸೆಯೆ ತನ್ನ ಸುತ್ತಿಪ್ಪ ಭವಪಾಶದ ಹೇಳಿಗೆ.
ತನ್ನಲ್ಲಿ ತೋರುತಿಪ್ಪ ತಥ್ಯಮಿಥ್ಯವೆ ಕೂರಲಗು.
ಬೇರೊಂದರಸಲೇಕೆ ಸಂಸಾರವ?
ಆತುರವೈರಿ ಮಾರೇಶ್ವರಾ.
Art
Manuscript
Music
Courtesy:
Transliteration
Nenahina bhāvakke ī bhava;
manasina mōhavella sati;
āseye tanna suttippa bhavapāśada hēḷige.
Tannalli tōrutippa tathyamithyave kūralagu.
Bērondarasalēke sansārava?
Āturavairi mārēśvarā.