Index   ವಚನ - 69    Search  
 
ಬೆಲ್ಲ ಹಣ್ಣಾದುದುಂಟೆ, ಪಾದಪಕ್ಕೆ ಫಲವಲ್ಲದೆ? ಬಲ್ಲವ ಎಲ್ಲರೊಳಗೆ ಬಲ್ಲಿದನಾದೆಹೆನೆಂದು ಗೆಲ್ಲ ಸೋಲಕ್ಕೆ ಹೋರುವ. ಅವನಲ್ಲಿಯೆ ಉಳಿದ ಎಡದೊಡೆ ಸಂದಿಯಲ್ಲಿ, ಆತುರವೈರಿ ಮಾರೇಶ್ವರಾ.