Index   ವಚನ - 71    Search  
 
ಪೂರ್ವವನಳಿದು ಪುನರ್ಜಾತನಾದ ಮತ್ತೆ ಜಾತತ್ವ ಅಳವಟ್ಟು ಆ ಗುರುಮೂರ್ತಿಯ ಇರವು ತಾನಾದ ಮತ್ತೆ ಹಿಂದ ಮೆಟ್ಟಲಿಲ್ಲ. ಬಂಧುಗಳೆಂದು, ಕೊಂಡ ಕೊಟ್ಟ ಬೆಂಬಳಿಯವರೆಂದು, ತಂದೆ ತಾಯಿ ಒಡಹುಟ್ಟಿದವರ. ಹಿಂದ ನೆನೆವನಿಗೇಕೆ ಗುರುಸ್ಥಲದ ಸಂಪತ್ತಿನಿರವು ಮಾತಾ ಉಮಾ ಪಿತಾ ಶಿವ ಶಿವಭಕ್ತ ಬಾಂಧವರಾದಲ್ಲಿ, ಅವರೊಳಗೆ ಒಬ್ಬರಿವರೆಂದು ವಿಶೇಷವ ಕಾಣದೆ ಕಾಬುದು ಗುರುಸ್ಥಲ. ಹಾಗಲ್ಲದೆ ಹಿಂದಣ ತೂತಿನವರೆಂದು ಬದ್ದುದ ಮಾಡಿ, ಮುಂದಣ ತೂತಿಂಗೀಡುಮಾಡುವ ಭಂಡಂಗೇಕೆ ಗಾಂಭೀರದ ಇರವು ಆತುರವೈರಿ ಮಾರೇಶ್ವರಾ.