ಹಿಂದೆ ನಾ ಬಂದ ಭವಕ್ಕೆ ಅಟ್ಟಣೆಯಿಲ್ಲ.
ಉದಯದಲ್ಲಿ ಕಮ್ಮಾರನ ಮನೆಗೆ ಬಂದು ಬೇಸತ್ತೆ.
ಮಧ್ಯಾಹ್ನದಲ್ಲಿ ಅಗಸನ ಮನೆಗೆ ಎಡತಾಕಿ ಬೇಸತ್ತೆ.
ಅಸ್ತಮಯದಲ್ಲಿ ನಾವಿದನ
ಮನೆಗೆ ಹೋಗಿ ನಿಂದಿರ್ದು ಬೇಸತ್ತೆ.
ಕಮ್ಮಾರನ ಕೈಯ ಮುರಿದವರಿಲ್ಲ,
ಅಗಸನ ಕಾಲ ಕಡಿದವರಿಲ್ಲ.
ನಾವಿದನ ತಲೆಯ ಕೊಯ್ದವರಿಲ್ಲ.
ಇಷ್ಟನಾರೈದುಕೊ, ಆತುರವೈರಿ ಮಾರೇಶ್ವರಾ.