ಆನು ನೀನೆಂಬ ಸಂದೇಹ
ಗಗನಕ್ಕೆ ಕೈಯನಿಟ್ಟಂತೆ!
ಕೈ ಗಗನವ ನುಂಗಿತ್ತೊ,
ಗಗನ ಕೈಯ ನುಂಗಿತ್ತೊ ಎಂಬುದ
ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ.
ನಿಜಗುಣನೆಂಬ ಆನಂದರತ್ನವ
ನುಂಗಿದ ರುಚಿಯನು ಏನೆಂದು ಉಪಮಿಸುವೆ?
Art
Manuscript
Music
Courtesy:
Transliteration
Ānu nīnemba sandēha
gaganakke kaiyaniṭṭante!
Kai gaganava nuṅgitto,
gagana kaiya nuṅgitto embuda
ninna nī tiḷidu tiḷivina kaṇṇinda nōḍayyā.
Nijaguṇanemba ānandaratnava
nuṅgida ruciyanu ēnendu upamisuve?