ಕಲ್ಲಿನ ಹುಳ್ಳಿಯ ನೀರಲ್ಲಿ ಹುಟ್ಟಿದ ಕಿಚ್ಚು
ತ್ರಿವಿಧಕ್ಕೂ ಅಲ್ಲಲ್ಲಿಯ ಗುಣವಲ್ಲಿಯದೆ,
ಬೇರೊಂದಕ್ಕೆಲ್ಲಿಯೂ ತೆರಪಿಲ್ಲ.
ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ
ಜೀವಗುಣದಿಂದ ಭವಕ್ಕೆ ಬೀಜವಾಗಿ
ಅರಿದಿಹೆ ಗುಣದಿಂದ ಮರವೆಗೆ ಒಳಾಗಾಗಿ.
ಅರಿದಿಹೆನೆಂಬ ಅರಿವು ಕುರುಹುಗೊಳ್ಳದೆ ನಿಂದುದು
ನಿಜಗುಣ ಯೋಗಿಯ ಯೋಗಕ್ಕೆ
ಭಾವವಿಲ್ಲದ ಸೂತ್ರದ ಬಿಂಬ.
Art
Manuscript
Music
Courtesy:
Transliteration
Kallina huḷḷiya nīralli huṭṭida kiccu
trividhakkū allalliya guṇavalliyade,
bērondakkelliyū terapilla.
Kāyaguṇadinda kalpitakkoḷagāgi
jīvaguṇadinda bhavakke bījavāgi
aridihe guṇadinda maravege oḷāgāgi.
Aridihenemba arivu kuruhugoḷḷade nindudu
nijaguṇa yōgiya yōgakke
bhāvavillada sūtrada bimba.