Index   ವಚನ - 16    Search  
 
ಶ್ರೀಗುರುವ ತಾನರಿದು ವರಗುರು ತಾನಾಗಬೇಕು. ಲಿಂಗನೈಷ್ಠಿಕೆಯಾಗಿ ಪೂಜಿಸಿಕೊಳ್ಳಬೇಕು. ಜಂಗಮ ತಾ ತ್ರಿವಿಧವ ಮರೆದು ಜಂಘೆ ನಾಸ್ತಿಯಾಗಿ ಜಂಗಮವಾಗಬೇಕು. ಜಂಗಮಕ್ಕೆ ಮಾಡಿ ನೀಡಿ ಸಂದು ಸಂಶಯವನಳಿದು ನಮ್ಮ ಚಂದೇಶ್ವರಲಿಂಗವನರಿಯಬೇಕು ಕಾಣಾ, ಎಲೆ ಅಲ್ಲಮಪ್ರಭುವೆ.