ಎಲ್ಲ ಎಲ್ಲವನರಿಯಬಹುದು;
ಸಾವನರಿಯಬಾರದು.
ಸರ್ವವಿದ್ಯೆ ಸಕಲವ್ಯಾಪ್ತಿಯನರಿಯಬಹುದು;
ಸಾವನರಿಯಬಾರದು.
ಶಿವ ಶಿವಾ ಮಹಾಪುರುಷರಿಗೆ ಸಾವುಂಟು.
ಹರಿ ಬ್ರಹ್ಮ ರುದ್ರರಿಗೆಯೂ ಸಾವುಂಟು.
ದಿಕ್ಪಾಲಕರು ಕಾಲ ಕಾಮ ದಕ್ಷಾದಿ
ದೇವ ದಾನವ ಮಾನವರಿಗೆಲ್ಲರಿಗೆಯೂ ಸಾವುಂಟು.
ಮಹಾಪುರುಷರಿಗೆಯೂ ಸಾವುಂಟು.
ಶಿವ ಶಿವಾ, ಈ ಸಾವನರಿಯದೀ ಲೋಕ!
ಪ್ರಪಂಚವ ಮರೆದು ಲಿಂಗದಲ್ಲಿ ನೆನಹು ನೆಲೆಗೊಂಡಡೆ
ಆ ಮಹಾಮಹಿಮಂಗೆ ಸಾವಿಲ್ಲ.
ಈ ಸಾವನರಿಯದ ಲೋಕ ಪ್ರಪಂಚ ಮರೆಯದೆ
ಅರಿದೆವೆಂಬ ಅರೆಮರುಳಗಳ ಅರಿವು
ಎಮ್ಮ ಗುಹೇಶ್ವರಲಿಂಗದಲ್ಲಿ
ಮಾನಹಾನಿಕಾಣಾ ಸಂಗನಬಸವಣ್ಣಾ
Hindi Translationसब कुछ जान सकते ;
मृत्यु नहीं जान सकते ।
सर्वविद्या सकल व्याप्ति जान सकते ;
मृत्यु नहीं जान सकते।
हरि-ब्रह्म-काल-काम-दक्षादि देव मानव सब को मृत्यु है।
महापुरुषों के भी मृत्यु है ।
शिवशिव इस मृत्यु को न जाना लोक संसार भूलकर,
लिंग में याद स्थिर हो तो उस महा महिम को मृत्यु नहीं,
इस मृत्यु न जाने अल्पज्ञानियों का ज्ञान
महा हानि देखो गुहेश्वरा ।
Translated by: Eswara Sharma M and Govindarao B N
English Translation
Tamil Translationஅனைத்தனைத்தையும் அறியவியலும்
மரணத்தை அறியவியலாது
அனைத்து வித்தைகள், பொருட்களையறியவியலும்
மரணத்தை அறியவியலாது
ஹரி, பிரம்மன், உருத்திரன், காமன், தட்சன்
அரக்கர், எனுமனைவருக்கும் முடிவு உள்ளது
மேன்மையுற்றோரும் அழிகின்றனர்
சிவசிவா மரணத்தை வெல்வதை உலகமறியாது
உலகியலை மறந்து, இலிங்கத்தில் மனத்தை நிலைநிறுத்தும்
பெருமை பெற்றோருக்கு மரணமில்லை.
மரணத்தையறியா அல்பஞானியரின் அறிவு
பெருங்கேட்டிற்குக் காரணமாம் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಿಯಬಹುದು = ಅರಿಯುವುದು ಸುಲಭ; ಅರಿಯಬಾರದು = ಅರಿಯುವುದು ಸುಲಭವಲ್ಲ; ಅರಿವು = ಅವರು ತಿಳಿದೆಲ್ಲ ವಿದ್ಯೆಗಳು; ಅರೆ ಮರುಳರು = ಅಲ್ಪ ಜ್ಞಾನಿಗಳು; ಎಲ್ಲ ಎಲ್ಲವನು = ಜಗತ್ತಿನೊಳಗಿರುವುದೆಲ್ಲವನು; ನೆನಹು ನೆಲೆಗೊಳ್ಳು = ತನ್ಮಯತೆಯುಂಟಾಗು; ಪ್ರಪಂಚ = ಬಾಹ್ಯಪ್ರಪಂಚ; ದೇಹ, ಮನ ಮತ್ತು ಬುದ್ದಿಗಳ ವೈಷಯಿಕ ವ್ಯವಹಾರ; ಮಹಾಮಹಿಮ = ಆತ್ಮಜ್ಞಾನಿ, ಶರಣ; ಮಹಾಹಾನಿ = ಭವಬಂಧನಕ್ಕೆ ಕಾರಣ; ಸಾವನು = ಸಾವಿನ ಸ್ವರೂಪವನು ಹಾಗೂ ಅದನು ಗೆಲುವ ವಿದ್ಯೆಯನು; Written by: Sri Siddeswara Swamiji, Vijayapura