Index   ವಚನ - 19    Search  
 
ಗುರುವನರಿದಲ್ಲಿ ಉತ್ಪತ್ಯಕ್ಕೆ ಹೊರಗಾಗಬೇಕು. ಲಿಂಗವನರಿದಲ್ಲಿ ಸ್ಥಿತಿಗೆ ಹೊರಗಾಗಬೇಕು. ಜಂಗಮವನರಿದಲ್ಲಿ ಲಯಕ್ಕೆ ಹೊರಗಾಗಬೇಕು. ಈ ಗುಣವನರಿದಲ್ಲದೆ ಸದ್ಭಕ್ತನಲ್ಲ. ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಕಾಣಬಾರದು.