Index   ವಚನ - 33    Search  
 
ನಾನೆಂಬುದ ಮರೆದಲ್ಲಿ ಗುರುಸ್ಥಲ. ಜಗದ ಆಗುಛೇಗೆಗೆ ಸಿಕ್ಕದಿಪ್ಪುದು ಲಿಂಗಸ್ಥಲ. ತ್ರಿವಿಧದ ಬಟ್ಟೆಗೆ ಬಾರದಿಪ್ಪುದು ಜಂಗಮಸ್ಥಲ. ಅಂಗವರತು, ಮನದ ಪ್ರಕೃತಿ ನಿಂದು, ಗುರು ಲಿಂಗ ಜಂಗಮದ ತ್ರಿವಿಧಾಂಗದಲ್ಲಿ ನಿಶ್ಚಯವಾದ ಸದ್ಭಕ್ತ ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವು ತಾನೆ.