Index   ವಚನ - 45    Search  
 
ಸುಖ ದುಃಖ ಭೋಗಾದಿ ಭೋಗಂಗಳೆಲ್ಲವೂ ಗುರು ಲಿಂಗ ಜಂಗಮದ ಒಡಲಾಗಿ ಬೆಳೆವುತ್ತಿಹವು. ತಾನವ ಒಡಲುಗೊಂಡು ಮಾಡುವ ಕಾರಣ ತನ್ನ ಬೆಂಬಳಿಯ ದೂಯೆ. ಅವ ಹಿಂಗಿ ತನ್ನ ತಾನರಿತಲ್ಲಿ ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಕಾಣಬಂದಿತ್ತು.