Index   ವಚನ - 3    Search  
 
ಎನ್ನ ಕನ್ನಡಿ ಒಳ ಹೊರಗಿಲ್ಲ. ಎನ್ನ ಘಳಿಹ ಮುಟ್ಟನೊಳಕೊಂಡ ಚಿರ ಹಡಪಕ್ಕೆ ಅಳವಲ್ಲ. ಕತ್ತಿಯ ಬಸವಣ್ಣ ಕೊಟ್ಟ. ಕತ್ತರಿಯ ಚೆನ್ನಬಸವಣ್ಣ ಕೊಟ್ಟ. ಕಿತ್ತುಹಾಕುವ ಚಿಮ್ಮಟಿಕೆಯ ಪ್ರಭುರಾಯ ಕೊಟ್ಟ. ಮಿಕ್ಕಾದ ಎನ್ನಯ ಮುಟ್ಟ ಸತ್ಯಶರಣರು ಕೊಟ್ಟರು. ದೃಷ್ಟವ ತೋರಿ ಅಡಗುವ ಮುಕುರವ ಕೊಟ್ಟವರ ಹೇಳುವೆನು ದೃಷ್ಟ ಪ್ರಸಿದ್ದ ಅಪ್ರತಿಮ ಪ್ರಸನ್ನ ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗವು ಎನಗೆ ದೃಷ್ಟವ ಕೊಟ್ಟು ತಾ ಬೆಳಗಿನೊಳಗಾದ!