Index   ವಚನ - 6    Search  
 
ನಾ ಶಸ್ತ್ರವ ಹಿಡಿದಲ್ಲಿ ಮುಮ್ಮುಖದಲ್ಲಿ ಒಂದನಿರಿಸಿ ಎರಡ ತೊಡೆವೆನು. ಪೂರ್ವಪಕ್ಷದಲ್ಲಿ ಆರನಿರಸಿ ಮೂರ ತೊಡೆವೆನು. ಉತ್ತರ ಪಕ್ಷದಲ್ಲಿ ಆರನಿರಸಿ ಮೂವತ್ತಾರ ತೊಡೆವೆನು. ಮೇಲಣ ದಂಡೆಯನೊತ್ತುವಲ್ಲಿ ಎರಡ ನಿಲಿಸಿ ಇಪ್ಪತ್ತೈದ ತೊಡೆವೆನು. ಇಂತೀ ಕೆಲಸವ ಸಾಧಿಸಿದಲ್ಲಿ, ಕಂಕುಳ ತಟ್ಟೆನು, ಮೂಗುವ ಮುಟ್ಟೆನು, ಮಂಡೆಯ ಬೋಳಿಸುವೆ, ಚಂಡಿಕೆಯನಿರಿಸುವೆನು ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ ಸಾಕ್ಷಿಯಾಗಿ.