ವಚನ - 510     
 
ಆದಿ ತ್ರೈಯುಗದಲ್ಲಿ ಅಧಿದೇವತೆಗಳು ಮೊದಲಾದ ದೇವ ದಾನವ ಮಾನವರೆಲ್ಲ ಮಾಯಾಮೋಹದಲ್ಲಿ ಹುಟ್ಟಿ ತೊಳಲಿ ಬಳಲುತ್ತೈದಾರೆ! ಆವ ವೇಷವಾದಡೇನು ತಾಮಸಧಾರಿಗಳಿಗೆ? ಕಾಮ ಕ್ರೋಧ ಲೋಭ ಬಿಡದ ನಾನಾ ವಿಧದ ಡಂಬಕರು! ಹೂಳದ ಹುಣ್ಣಿಂಗೆ ಆರಯ್ಯಾ ಮದ್ದನಿಕ್ಕುವರು? ಇದೇನು ಗುಹೇಶ್ವರ? ಸೋರೆಯ ಬಣ್ಣದ ಹಿರಿಯರು!