Index   ವಚನ - 9    Search  
 
ತನು ಸೆಜ್ಜೆ ಮನ ಲಿಂಗವಾದ ಬಳಿಕ ಆನು ಮತ್ತೆ ಬೇರೆ ಅರಸಲುಂಟೆ? ತನುವೆ ಬಸವಣ್ಣ ಮನವೇ ಪ್ರಭುದೇವರೆಂಬ ಮಹಾ ಘನವನೊಳಕೊಂಡಿರ್ದ ಬಳಿಕ ಗುಣಾವಗುಣವ ಸಂಪಾದಿಸುವರೆ? ಮಹಾಲಿಂಗ ತ್ರಿಪುರಾಂತಕದೇವ, ಸಂಗನ ಬಸವಣ್ಣನಲ್ಲಿ ನಿಮ್ಮಡಿಗಳಲ್ಲಿ ಸಂದು ಸಂಶಯವುಂಟೆ? ಬಿಜಯಂಗೈವುದಯ್ಯಾ ಪ್ರಭುವೆ.