Index   ವಚನ - 13    Search  
 
ಭಕ್ತಿಸ್ಥಲವನರಿದು ತಮ್ಮ ಭಕ್ತಿ ಸ್ಥಲದಲ್ಲಿ ಬಯಲಾದರು ಸಂಗನ ಬಸವರಾಜದೇವರು. ಮಾಹೇಶ್ವರಸ್ಥಲವನರಿದು ತಮ್ಮ ಮಾಹೇಶ್ವರಸ್ಥಲದಲ್ಲಿ ಬಯಲಾದರು ಮಡಿವಾಳ ಮಾಚಿತಂದೆಗಳು. ಪ್ರಸಾದಿಸ್ಥಲವನರಿದು ತಮ್ಮ ಪ್ರಸಾದಿಸ್ಥಲದಲ್ಲಿ ಬಯಲಾದರು ಬಿಬ್ಬಬಾಚಯ್ಯಗಳು. ಪ್ರಾಣಲಿಂಗಿಸ್ಥಲವನರಿದು ತಮ್ಮ ಪ್ರಾಣಲಿಂಗಿಸ್ಥಲದಲ್ಲಿ ಬಯಲಾದರು ನುಲಿಯ ಚಂದಯ್ಯಗಳು. ಶರಣಸ್ಥಲವನರಿದು ಶರಣಸ್ಥಲದಲ್ಲಿ ಬಯಲಾದರು ಘಟ್ಟಿವಾಳಯ್ಯಗಳು. ಐಕ್ಯಸ್ಥಲವನರಿದು ತಮ್ಮ ಐಕ್ಯಸ್ಥಲದಲ್ಲಿ ಬಯಲಾದರು ಅಜಗಣ್ಣಯ್ಯಗಳು. ಇಂತೀ ಷಡ್ವಿಧಸ್ಥಲವನರಿದು ತಮ್ಮ ಷಡ್ವಿಧಸ್ಥಲದಲ್ಲಿ ಬಯಲಾದರು ಚೆನ್ನಬಸವೇಶ್ವರ ದೇವರು. ನಿಜಸ್ಥಲನರಿದು ತಮ್ಮ ನಿಜಸ್ಥಲದಲ್ಲಿ ಬಯಲಾದರು ಅಲ್ಲಮಪ್ರಭುದೇವರು. ನಿರ್ವಯಲಸ್ಥಲವನರಿದು ತಮ್ಮ ನಿರ್ವಯಲಸ್ಥಲದಲ್ಲಿ ಬಯಲಾದರು ಏಳ್ನೂರೆಪ್ಪತ್ತಮರಗಣಂಗಳು. ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದವ ಕೊಂಡು ನಾನು ಬಯಲಾದೆನು ಕಾಣಾ ಮಹಾಲಿಂಗ ತ್ರಿಪುರಾಂತಕದೇವಾ.