ವಿಷಯಂಗಳು ನಿರ್ವಿಷಯವಾದವಿಂದು,
ಕರ್ಣಂಗಳು ತರಹರಿಸಿದವಿಂದು,
ಎನ್ನ ಅಳುಪೆಂಬ ಅರೆವಾವು ಮಡಿಯಿತ್ತಿಂದು
ಎನ್ನ ಹೃದಯದ ಕಲ್ಮಶ ತೊಡೆಯಿತ್ತಿಂದು
ಮಹಾಲಿಂಗ ತ್ರಿಪುರಾಂತಕ,
ಮಹಾದೇವಿಯಕ್ಕಗಳ ಧರ್ಮದಿಂದ
ಹಿಂದಣ ಹುಟ್ಟು ಮುರಿಯಿತ್ತಿಂದು.
Art
Manuscript
Music
Courtesy:
Transliteration
Viṣayaṅgaḷu nirviṣayavādavindu,
karṇaṅgaḷu taraharisidavindu,
enna aḷupemba arevāvu maḍiyittindu
enna hr̥dayada kalmaśa toḍeyittindu
mahāliṅga tripurāntaka,
mahādēviyakkagaḷa dharmadinda
hindaṇa huṭṭu muriyittindu.