Index   ವಚನ - 1    Search  
 
ಇಮ್ಮನ ಹತ್ತಿಯ ಕಾಳ ಸುರಿದು ಪಶು ಮೇವುತ್ತಿರಲಾಗಿ ಓಮ್ಮನವ ಮೇದು ಇಮ್ಮನ ಉಳಿಯಿತ್ತು. ಅದ ಸುಮ್ಮಾನದಲ್ಲಿ ಕರೆಯ ಹೋಗಲಿಕ್ಕೆ ಅಂಡೆಯಲ್ಲಿ ಐಗುಳವ ಕರೆದು ಕಂದಲಲ್ಲಿ ಸುರಿಯಲಾಗಿ ಮೂಗುಳವಾಯಿತ್ತು. ಆ ಮೂಗುಳವ ಒಲೆಯ ದೆಸೆಯಲ್ಲಿರಸಲಿಕೆ ಕಾಸೂದಕ್ಕೆ ಮುನ್ನವೆ ನಾಶವಾಯಿತ್ತು. ಇಂತೀ ಈಶ್ವರ ವಿಶ್ವಾಸದಲ್ಲಿ ಆತ್ಮ ನಿಶ್ಚಯಿಸಲಾಗಿ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು.