ವಚನ - 517     
 
ಅರಿಯದಂತಿರಲೊಲ್ಲದೆ, ಅರಿವು ಕುರುಹಾದೆಯಲ್ಲಾ! ಹಿರಿಯರೆಲ್ಲರು ನೆರೆದು ನಿಮ್ಮ ಕಟ್ಟಿದರೆ ಅಯ್ಯಾ, ಉಪಚಾರಕ್ಕೋಸುಗ? ಸಾವಿಂಗೆ ಸಂಗಡವಾದೆಯಲ್ಲಾ ಗುಹೇಶ್ವರಾ!