Index   ವಚನ - 1    Search  
 
ಅಖಂಡ ಪರಿಪೂರ್ಣ ಲಿಂಗ ತಾನೆಯಾದ ಶರಣಂಗೆ ಲಿಂಗವೆಂಬುದೇನು ಹೇಳಾ? ಲಿಂಗ ಹೊರಗೊ ಒಳಗೊ ಎಂದು ಶಂಕಿಸಿ ನುಡಿವ ಶಂಕಿತರಂತಿರಲಿ. ಮುನ್ನ ಮುನ್ನವೆ ಮಹಾಲಿಂಗವಾದ ಬಳಿಕ ಮತ್ತೇನೆಂದು ನೆನೆಯಲಿಲ್ಲ. ಮಹಾಲಿಂಗ ಗಜೇಶ್ವರನಲ್ಲಿ ನಿಜೈಕ್ಯವಾದ ಶರಣಂಗೆ ಮುಂದೆ ಒಂದೂ ಇಲ್ಲ, ಮಾಣು.