Index   ವಚನ - 9    Search  
 
ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯಲ್ಲಿ ಲಿಂಗವುಂಟೆ? 'ಸ್ವಯಮಾತ್ಮ ಪರೋಲಿಂಗ' ವೆಂದುಲಿವ ಬೀದಿಯ ಭಂಡರ ಮಾತ ಕೇಳಲಾಗದು. ತಿಲಕುಸುಮ ಪರಿಮಳದಂತೆ ಒಳ ಹೊರಗು ಪರಿಪೂರ್ಣ ಮಹಾಲಿಂಗ ಗಜೇಶ್ವರಾ.