ಆಲಿಕಲ್ಲ ಮರದಡಿಯಲಿಹ
ಮಘಮಘಿಸುವ ಗಿಳಿವಿಂಡು
ಉರವಣಿಸುವ ಪಕ್ಷಿಗಳು,
ಸರಸಗೈವ ಕೋಗಿಲೆ,
ಗಗನದ ಚಂದ್ರಮ;
ಅಗಲಲಾರೆನು ಸಖಿಯೆ
ಬೆಳುದಿಂಗಳು ಬಿಸಿಲಾದವೆ?
ಗಗನದ ದಶರಥನ ಬೀಡಿನಲ್ಲಿ
ಕಾಮಿನಿ ಕೈವೋದಳೆ?
ದಶಾವಸ್ಥೆಗೊಂಡೆನು ಮಹಾಲಿಂಗ ಗಜೇಶ್ವರನುಳಿದಡೆ.
Art
Manuscript
Music
Courtesy:
Transliteration
Ālikalla maradaḍiyaliha
maghamaghisuva giḷiviṇḍu
uravaṇisuva pakṣigaḷu,
sarasagaiva kōgile,
gaganada candrama;
agalalārenu sakhiye
beḷudiṅgaḷu bisilādave?
Gaganada daśarathana bīḍinalli
kāmini kaivōdaḷe?
Daśāvasthegoṇḍenu mahāliṅga gajēśvaranuḷidaḍe.