Index   ವಚನ - 22    Search  
 
ಎಲೆ ಎಲೆ ತಾಯೆ ನೋಡವ್ವಾ! ಮಾಘಮಾಸದ ನವಿಲಿನಂತೆ ಆದೆ ನೋಡವ್ವಾ! ಇರುಳು ತೊಳಲುವ ಜಕ್ಕವಕ್ಕಿಯಂತೆ ಹಲಬುತ್ತಿದ್ದೆ ನೋಡವ್ವಾ! ಮಾಗಿಯ ಕೋಗಿಲೆಯಂತೆ ಮೂಗಿಯಾಗಿದ್ದೆ ನೋಡವ್ವಾ! ಮಹಾಲಿಂಗ ಗಜೇಶ್ವರನ ಅನುಭಾವಸಂಬಂಧಿಗಳ ಬರವೆನ್ನ ಪ್ರಾಣದ ಬರವು ನೋಡವ್ವಾ.