Index   ವಚನ - 53    Search  
 
ಬಿಟ್ಟ ತಲೆಯ ಬಿಡುಮುಡಿಯ ಬರುಮೈಯ ಕಿವಿಯ ಬಿಚ್ಚೋಲೆಯ ಬಿಟ್ಟ ನಿರಿಯ ಸಡಿಲಿದ ಕಳೆಯ ಘಳಿಲನೆ ನಡೆತಂದಳು. ನಚ್ಚಿ ಮಚ್ಚಿ ಮನಸಂದ ಕಳೆವಳು. ಬಂದಪ್ಪಿನ ಸೋಂಕಿನ ಸುಖವ ಮಹಾಲಿಂಗ ಗಜೇಶ್ವರ ತಾನೆ ಬಲ್ಲ.