ಸಮರಸದೊಳಗಣ ಸ್ನೇಹ
ಮತ್ಸ್ಯ ಕೂರ್ಮ ವಿಹಂಗದಂತೆ;
ಸ್ನೇಹದ ನೋಟದಲ್ಲಿಯೇ ತೃಪ್ತಿ,
ಸ್ನೇಹದ ನೆನಹಿನಲ್ಲಿಯೇ ತೃಪ್ತಿ,
ಸ್ನೇಹದ ಸ್ಪರ್ಶನದಲ್ಲಿಯೇ ತೃಪ್ತಿ.
ಈ ಪರಿಯಲ್ಲಿ ಎಮ್ಮ ಮಹಾಲಿಂಗ
ಗಜೇಶ್ವರನಲ್ಲಿ ಲಿಂಗೈಕ್ಯವು
ವಾರಿಕಲ್ಲ ಪುತ್ಥಳಿ ಕರಗಿ
ಅಪ್ಪುವನೊಡಗೂಡಿದಂತಾಯಿತ್ತು.
Art
Manuscript
Music
Courtesy:
Transliteration
Samarasadoḷagaṇa snēha
matsya kūrma vihaṅgadante;
snēhada nōṭadalliyē tr̥pti,
snēhada nenahinalliyē tr̥pti,
snēhada sparśanadalliyē tr̥pti.
Ī pariyalli em'ma mahāliṅga
gajēśvaranalli liṅgaikyavu
vārikalla put'thaḷi karagi
appuvanoḍagūḍidantāyittu.