ಒಂದು ಧನುವಿಂಗೆ ಮೂರಂಬ ಹಿಡಿದೆ.
ಒಂದು ಬಾಣವ ಬಿಡಲಾಗಿ
ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು.
ಮತ್ತೊಂದು ಬಾಣವ ಬಿಡಲಾಗಿ
ಪದ್ಮನಾಭನ ಹೆಡಗಯ್ಯ ಕಟ್ಟಿತ್ತು.
ಕಡೆಯ ಬಾಣ ರುದ್ರನ ಹಣೆಯನೊಡೆದು
ಅಲಗು ಮುರಿಯಿತ್ತು; ಗರಿ ಜಾರಿತ್ತು;
ನಾರಿಯ ಹೂಡುವ ಹಿಳುಕು ಹೋಳಾಯಿತ್ತು;
ಗೊಹೇಶ್ವರನ ಶರಣ ಅಲ್ಲಮ
ಹಿಡಿದ ಬಿಲ್ಲು ಮುರಿಯಿತ್ತು.
Art
Manuscript
Music
Courtesy:
Transliteration
Ondu dhanuviṅge mūramba hiḍide.
Ondu bāṇava biḍalāgi
padmōdbhavana sr̥ṣṭiya kaṭṭittu.
Mattondu bāṇava biḍalāgi
padmanābhana heḍagayya kaṭṭittu.
Kaḍeya bāṇa rudrana haṇeyanoḍedu
alagu muriyittu; gari jārittu;
nāriya hūḍuva hiḷuku hōḷāyittu;
gohēśvarana śaraṇa allama
hiḍida billu muriyittu.