Index   ವಚನ - 9    Search  
 
ಮದಕರಿ ಮದವೇರಿ ಬೀದಿಯಲ್ಲಿ ಬರಲಾಗಿ ಎಂಟು ಕೇರಿಯ ಕಂಬ ಮುರಿದು ಒಂಭತ್ತು ಬಾಗಿಲ ಕದವ ಕಿತ್ತು ಮತ್ತೆ ಎನ್ನ ಮೇಲೊತ್ತಿ ಬರಲಾಗಿ ನಿಶ್ಚಯವಾಗಿ ನಿಂದೆ. ಮತ್ತಗಜದ ಸೊಂಡಿಲು ಮುರಿದೊತ್ತಿ ಇಟ್ಟೆ ಆ ಗಜವ ಗೊಹೇಶ್ವರನ ಶರಣ ಅಲ್ಲಮನೊತ್ತಿಗಾಗಿ.