ಎನ್ನಂತರಂಗವೆ ಬಸವಣ್ಣನಯ್ಯಾ.
ಎನ್ನ ಬಹಿರಂಗವೆ ಚೆನ್ನಬಸವಣ್ಣನಯ್ಯಾ.
ಎನ್ನ ಸರ್ವಾಂಗವೆ ಪ್ರಭುದೇವರಯ್ಯಾ.
ಇಂತಿವರ ಕರುಣದ ಕಂದನಾಗಿ ಬದುಕಿದೆನಯ್ಯಾ,
ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ
ದಿಟವೆನ್ನಿರಣ್ಣಾ.
Art
Manuscript
Music
Courtesy:
Transliteration
Ennantaraṅgave basavaṇṇanayyā.
Enna bahiraṅgave cennabasavaṇṇanayyā.
Enna sarvāṅgave prabhudēvarayyā.
Intivara karuṇada kandanāgi badukidenayyā,
tripurāntaka liṅgadalli gāvudi mācayya hēḷiduda
diṭavenniraṇṇā.