Index   ವಚನ - 4    Search  
 
ತನ್ನ ದೇಹ ತನಗೆ ಹೊರೆಯಾದ ಮತ್ತೆ ತಾ ಹೊರುವುದೇನು? ತಾ ಹೇಳುವ ಅರಿವು ತನಗೆ ಮರವೆಯಾದ ಮತ್ತೆ ತಾನರಿವುದೇನು? ಇದು ಕಾರಣ, ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.