Index   ವಚನ - 10    Search  
 
ಹುಲ್ಲಾದಡೂ ತಳ್ಳಿ ಹೋಹ ಜಲವೆ ತಡೆವುದು. ಹುಳ್ಳಿಯಾದಡೂ ಪ್ರಸ್ತಾವಕ್ಕೊದಗುವದು. ಎನ್ನಲ್ಲಿದ್ದ ಮಾತು ಭಕ್ತಿಯುಳ್ಳವರಿಗೆಲ್ಲಕ್ಕೂ ಬೇಕು. ಎನ್ನೊಡೆಯ ಸಂಗನ ಬಸವಣ್ಣ ಪಣ್ಣೆಯದಂದವನಿಕ್ಕಿ ಕೊಟ್ಟ ಆ ಪ್ರತಿರೋಧದಲ್ಲಿದ್ದೇನೆ, ಆ ಮಾತಿಂಗೆ ದಂದಣಾ ದತ್ತಣಾ ಎನ್ನದೆ. ಇದರಂದವ ತಪ್ಪದಾಡಿ ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಪಣ್ಣೆಯದ ಚಿಣ್ಣ ಹೇಳಿದ ಮಾತ ಕೇಳಿರಣ್ಣಾ.